ಪುತ್ತೂರು: ಬ್ಲಾಕ್ ಕಾಂಗ್ರೆಸ್ ಗೆ ಸಂಬಂಧಪಟ್ಟ ಆರ್ಯಾಪು ಗ್ರಾಮದ ವಲಯ ಕಾಂಗ್ರೆಸ್ ಸಮಿತಿ ಸಭೆಯು ಸಂಪ್ಯ ಉಸ್ಮಾನ್ ಹಾಜಿ ಚೆನ್ನಾವರ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರು ಉಪಸ್ಥಿತರಿದ್ದು, ಪಕ್ಷದ ವಿವಿಧ ಘಟಕದ ಅಧ್ಯಕ್ಷರುಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಸೇರಿದ ಕಾರ್ಯಕರ್ತರ ಸೂಚನೆಯಂತೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್ಯಾಪು ಗ್ರಾಮದ ತೊಟ್ಲ ನಿವಾಸಿ ಪ್ರಜ್ವಲ್ ರೈ ತೊಟ್ಲ ರವರನ್ನು ನೇಮಕ ಮಾಡಲಾಯಿತು.
ಪ್ರಜ್ವಲ್ ರೈ ಯವರು ಆರ್ಯಾಪು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದರು, ಪ್ರಜ್ವಲ್ ರೈ ಯವರು ಸಯ್ಯಾದ್ರಿ ಫ್ರೆಂಡ್ ಸರ್ಕಲ್ ಕೈಕಾರ ಇದರ ಗೌರವ ಅಧ್ಯಕ್ಷರಾಗಿ ಕಳೆದ 7 ವರ್ಷ ಸತತವಾಗಿ ಕೆಸರು ಗದ್ದೆ ಆಟ ಸಂಘಟಿಸಿದ ಖ್ಯಾತಿ ಒಳಗಾಗಿರುತ್ತಾರೆ. ಹಾಗೂ ಒಡಿಯೂರು ಸ್ವಾಮೀಜಿಯವರ ಗ್ರಾಮೀಣ ಅಭಿವೃದ್ಧಿ ಸಂಘಟನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಕಟ ಪೂರ್ವ ವಲಯ ಅಧ್ಯಕ್ಷ ರಾದ ಅಶೋಕ್ ಕುಮಾರ್ ಸಂಪ್ಯ ರವರನ್ನು ಕಾಂಗ್ರೆಸ್ ಸೇವಾದಳದ ಜಿಲ್ಲಾಪದಾಧಿಕಾರಿ ಸ್ಥಾನಕ್ಕೆ ಪಕ್ಷ ಶಿಫಾರಸ್ಸು ಮಾಡಿರುತ್ತದೆ. ಎಂದು ತಿಳಿದು ಬಂದಿದೆ.