ಮಂಜೇಶ್ವರ: ಕಾವಲುಗಾರನ ಮೇಲೆ ಹಲ್ಲೆ ನಡೆಸಿ ,ಕಟ್ಟಿ ಹಾಕಿ ಆಭರಣ ಮಳಿಗೆಯಿಂದ 15 ಕಿಲೋ ಬೆಳ್ಳಿ ಆಭರಣ ಹಾಗೂ ನಾಲ್ಕು ಲಕ್ಷ ರೂ , ನಗದು ಕಳವುಗೈದ ಘಟನೆ ಜು.26ರ ಸೋಮವಾರ ಮುಂಜಾನೆ ಮಂಜೇಶ್ವರ ಹೊಸಂಗಡಿಯಲ್ಲಿ ನಡೆದಿದೆ.
ದರೋಡೆಕೋರರ ಹಲ್ಲೆಯಿಂದ ಗಂಭೀರ ಗಾಯಗೊಂಡ ಕಾವಲುಗಾರ ಅಬ್ದುಲ್ಲಾ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.