ಪುತ್ತೂರು: ದರ್ಬೆತಡ್ಕ ಶಾಲೆಯ ಸಮೀಪ ದಲಿತ ಕುಟುಂಬವೊಂದು ಸರಕಾರಿ ಜಾಗದಲ್ಲಿದ್ದಾರೆಂದು ದೂರಿನ ಮೇರೆಗೆ ಕಂದಾಯ ಇಲಾಖೆ ಮಾಡಿದ ಮತ್ತು ಮನೆಯನ್ನು ಕಳೆದು ಕೊಂಡ ದಲಿತ ಕುಟುಂಬದ ಆಧಾರಸ್ಥಂಭವಾಗಿದ್ದ ರಘುನಾಥ ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ. ವಿಷಪದಾರ್ಥ ಸೇವಿಸಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ರಘುನಾಥ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.