ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ನಿಲ್ಲಿಸಲು ಮುಂದದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ವಿಟ್ಲ ಕಾಶಿಮಠದಲ್ಲಿ ನಡೆದಿದೆ.
ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಅಸೀಫ್ ಯಾನೆ ಅಚಿ (28), 2) ಸವಣೂರು ಗ್ರಾಮದ ಚಾಪಳ್ಳ ನಿವಾಸಿ ಫರಾಝ್ (23) ಬಂಧಿತ ಆರೋಪಿಗಳು.
ವಿಟ್ಲ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ನಾಗಾರಾಜ್ ಹೆಚ್ ಮತ್ತು ಪ್ರೋಬೆಷನರಿ ಪಿಎಸ್ಐ ಮಂಜುನಾಥ, ಸಿಬ್ಬಂದಿಗಳಾದ ಪ್ರಸನ್ನ, ಪ್ರತಾಪ್, ಲೋಕೇಶ್, ಹಾಗೂ ಪ್ರವೀಣ್ ಅವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಆಟೋ ರಿಕ್ಷಾವನ್ನು ಹೋಗುವುದನ್ನು ಗಮನಿಸಿದಾಗ ಆಟೋ ರಿಕ್ಷಾವನ್ನು ಅದರ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಆಟೋ ರಿಕ್ಷಾ ಚಾಲಕನು ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಆಟೋ ರಿಕ್ಷಾವು ಚಾಲಕನ ಹತೋಟಿ ತಪ್ಪಿ 30 ಅಡಿ ದೂರದಲ್ಲಿ ಉಕ್ಕಡ ಕಡೆಗೆ ಮುಖ ಮಾಡಿ ಮಗುಚಿ ಬಿದ್ದುದರಿಂದ ಅವರ ರಕ್ಷಣೆಗೆ ಸಿಬ್ಬಂದಿಗಳು ಹೋದಾಗ ಅವರು ಬಿದ್ದ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳು ಹಿಡಿದುಕೊಂಡು ವಿಚಾರಣೆ ನಡೆಸಿದ್ದಾರೆ.
ಆಟೋ ರಿಕ್ಷಾದಲ್ಲಿ ಗಾಂಜಾ ಇರುವುದನ್ನು ತಿಳಿಸಿ ಆಟೋ ರಿಕ್ಷಾದ ಬಳಿ ಬಂದು ಚಾಲಕನ ಸೀಟಿನ ಅಡಿಯಲ್ಲಿದ್ದ ಒಂದು ಕಟ್ಟನ್ನು ತೆಗೆದು ಇದು ಗಾಂಜಾದ ಕಟ್ಟು ಎಂದು ತೋರಿಸಿ ಇದನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದರಿಂದ ಕೂಡಲೇ ವಾಹನವನ್ನು ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.