ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಅಭ್ಯರ್ಥಿಗಳ ಆಯ್ಕೆಗೆ ಈ ಮೊದಲೇ ನೀಡಿದ ಸೂಚನೆಯ ಪ್ರಕಾರ ಆನ್ಲೈನ್ ಅಪ್ಲಿಕೇಶನ್ ಮುಕ್ತಾಯಗೊಂಡ ಬೆನ್ನಲ್ಲೇ ನಾಳೆ ಪೊಲೀಸ್ ಸಬ್ ಇನ್ಸ್ಪೆಕ್ಷರ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯು ಮಂಗಳೂರಿನ ಲೇಡಿಹಿಲ್ ನಲ್ಲಿರುವ ಮಂಗಳಾ ಸ್ಟೇಡಿಯಂ ನಲ್ಲಿ ಜು.29 ರಂದು ನಡೆಯಲಿದೆ.
ಸಿವಿಲ್ ಪಿಎಸ್ಐ 545 ಮತ್ತು 402 ರ ಎರಡೂ ಹುದ್ದೆಗಳಿಗನುಸಾರವಾಗಿ ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದೂ, ಎರಡೂ ಪರೀಕ್ಷೆಗಳಲ್ಲಿ ಅರ್ಹತೆಗೊಂಡಲ್ಲಿ ಅಂತಹ ಅಭ್ಯರ್ಥಿಗಳನ್ನು ಅರ್ಹರೆಂದು ಹಾಗೂ ಗೈರುಹಾಜರಾದ ಅಭ್ಯರ್ಥಿಗಳನ್ನು ಅನರ್ಹರೆಂದು ಪರಿಗಣಿಸಿ ಗೈರಾದ ಅಭ್ಯರ್ಥಿಗಳಿಗೆ 402 ರ ಹುದ್ದೆಗಳಿಗೆ ಮರು ಪರೀಕ್ಷೆಗೆ ಅವಕಾಶನೀಡಲಾಗುವುದೆಂದು ಇಲಾಖೆ ತಿಳಿಸಿದೆ.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಇರುವುದರಿಂದ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿದ್ದು, ಮಾಸ್ಕ್ ಧರಿಸಿ ಸಹಕರಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸೂಕ್ತ ವೆಬ್ಸೈಟ್ ನ್ನು ಗಮನಿಸಬಹುದಾಗಿದೆ.