ಪುತ್ತೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಾಮೆತಡ್ಕ ಗೋಪಾಲ ಕೃಷ್ಣಭಟ್ ಹಾಗೂ ಮಾಜಿ ಎಂ ಎಲ್ ಸಿ ದಿವಂಗತ ಕೆದಂಬಾಡಿ ಜತ್ತಪ್ಪರೈ ರವರ ಪುತ್ರ ಕಾಂಗ್ರೆಸ್ ನಾಯಕರಾಗಿರುವ ಪ್ರಸನ್ನ ಕುಮಾರ್ ರೈ ಸಂಪ್ಯ ರವರ ಮನೆಗೆ ಭೇಟಿ ನೀಡಿ ಪುತ್ತೂರಿನಲ್ಲಿ ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚನೆ ನಡೆಸಿ ಅವರ ಸಹಕಾರವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.