ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎರುಕೊಟ್ಯ ನಿವಾಸಿ ರಾಮನಾಯ್ಕರವರು ಅನಾರೋಗ್ಯ ಪೀಡಿತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಣ್ಣಿನ ಗೋಡೆಯ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆಯ ಗೋಡೆಯು ಕುಸಿದು ಬಿದ್ದಿರುತ್ತದೆ. ಕಡುಬಡತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಇವರು ಕಾಲು ಮುರಿತಕ್ಕೊಳಗಾಗಿ ದುಡಿಯುವ ಪರಿಸ್ಥಿತಿಯಲ್ಲಿಲ್ಲ ಅಲ್ಲದೆ ಇವರ ಪತ್ನಿ ಐದು ವರ್ಷಗಳಿಂದ ಪಾರ್ಶ್ವವಾಯು ಖಾಯಿಲೆಯಿಂದ ಮಲಗಿದ್ದಲ್ಲಿಯೇ ಇದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟ ಎಂದಿದ್ದ ಇವರಿಗೆ ಮನೆಯು ಕುಸಿದು ಬಿದ್ದುದರಿಂದ ದಿಕ್ಕು ತೋಚದೆ ಇರುವಾಗ ಅಶೋಕ್ ರೈ ಅಭಿಮಾನಿ ಬಳಗದವರು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಕೂಡಲೇ ಸ್ಪಂದನೆ ನೀಡಿದ ಅಶೋಕ್ ರೈ ಯವರು ನಿನ್ನೆ ರಾತ್ರಿಯೇ ಇವರ ಮನೆಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ , ಮನೆ ರಿಪೇರಿಯನ್ನು ಎಲ್ಲರ ಸಹಕಾರದೊಂದಿಗೆ ಮಾಡುವ ಮತ್ತು ರಿಪೇರಿ ಮಾಡಿಸಲು ಬೇಕಾದ ಸಾಮಾಗ್ರಿ ನೀಡುವುದಾಗಿ ತಿಳಿಸಿದರು. ಅಲ್ಲದೆ ಅವರ ಪರಿಸ್ಥಿತಿಯನ್ನು ನೋಡಿ ದಿನ ನಿತ್ಯದ ನಿರ್ವಹಣೆಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ್ ರೈ ಕೊಯಿಲ, ಪ್ರದೀಪ್ ಪಾಟಾಳಿ ಪುತ್ತೂರು, ಗುರುಪ್ರಸಾದ್ ರೈ ಕುದ್ಕಾಡಿ, ಲಿಂಗಪ್ಪ ಗೌಡ ಮೊಡಿಕೆ, ಪ್ರವಿಣ್ ಪಾಟಾಳಿ ಮುಡಿಪಿನಡ್ಕ ಉನ್ನಿ ಪಟ್ಟೆ ಉಪಸ್ಥಿತರಿದ್ದರು.