ವಿಟ್ಲ: ವಿಟ್ಲ ಠಾಣಾ ನೂತನ ಎಸ್. ಐ ಆಗಿ ಸುಳ್ಯ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್.ಐ. ಆಗಿದ್ದ ಸಂದೀಪ್ ಕುಮಾರ್ ಶೆಟ್ಟಿಯವರನ್ನು ನೇಮಕಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.
೨೦೧೮ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಸಂದೀಪ್ ಕುಮಾರ್ ಶೆಟ್ಟಿಯವರು ಮೈಸೂರಿನಲ್ಲಿ ಟ್ರೈನಿಂಗ್ ಪಡೆದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು. ವಿಟ್ಲ ಠಾಣಾ ಎಸ್.ಐ. ಆಗಿದ್ದ ವಿನೋದ್ ಕುಮಾರ್ ರೆಡ್ಡಿಯವರನ್ನು ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗಾವಣೆಗೊಳಿಸಲಾಗಿದ್ದು, ಇದೀಗ ತೆರವಾಗಿದ್ದ ಅವರ ಸ್ಥಾನಕ್ಕೆ ಸಂದೀಪ್ ಕುಮಾರ್ ಶೆಟ್ಟಿಯವರನ್ನು ನೇಮಕ ಮಾಡಲಾಗಿದೆ. ಸಂದೀಪ್ ಕುಮಾರ್ ಶೆಟ್ಟಿಯವರು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿಯಾಗಿದ್ದಾರೆ.