ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ದೇವರಿಗೆ ಸೀಯಾಳಭಿಷೇಕ ನಡೆಯಿತು.
ಬೆಳಿಗ್ಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಸಂಕಲ್ಪ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಸಂದರ್ಭ ದೇವಳದಿಂದ ಪ್ರಸಾದ ವಿತರಣೆ ನಡೆಯಿತು. ಸೀಯಾಳಾಭಿಷೇಕದ ತೀರ್ಥವನ್ನು ಭಕ್ತರಿಗೆ
ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷರಾದ ಡಾ. ಪ್ರಸಾದ್ ಭಂಡಾರಿ ಯವರು, ಪ್ರತಿ ವರ್ಷ ಈ ವರ್ಷವೂ ನಾವು ಮಹಾಲಿಂಗೇಶ್ವರ ದೇವರಿಗೆ ಸೀಯಾಳಭಿಷೇಕ ಮಾಡಬೇಕು ಸಂಕಲ್ಪ ಮಾಡಿದ ರೀತಿಯಲ್ಲೇ ಇವತ್ತು ಸೀಯಾಭಿಷೇಕ ಮಾಡಿದ್ದೇವೆ. ಮಳೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಬರಲಿ ಅತಿವೃಷ್ಟಿ ಬೇಡ, ಅಲ್ಪವೃಷ್ಠಿ ಬೇಡ ಬೇಕಾದಷ್ಟು ಮಳೆ ಬರಲಿ, ಎಲ್ಲಾಕ್ಕಿಂತಾ ಹೆಚ್ಚಾಗಿ ನಾವು ಈಗ ಎದುರಿಸುತ್ತಿರುವ ಕೊರೊನಾ ಎಂಬ ಮಹಾಮಾರಿಯಿಂದ ನಮಗೆ ಆದಷ್ಟು ಬೇಗ ಮುಕ್ತಿ ದೊರೆಯಬೇಕು.
ಮೂರನೇ ಅಲೆ ಯಾವುದೇ ಕಾರಣಕ್ಕೂ ಬರಬಾರದು, ಇದರಿಂದ ನಮಗೆ ಅಪಾರ ಪ್ರಮಾಣದ ತೊಂದರೆಯಾದಿತು, ಈ ಕಾರಣಕ್ಕಾಗಿ ಮೂರನೇ ಅಲೆ ಬರಬಾರದು ಹಾಗೇ ಎಲ್ಲಾ ಜನರು ಆರೋಗ್ಯವಂತರಾಗಿರಬೇಕು ಮತ್ತು ಜನರಿಗೆ ವ್ಯಾಪಾರ, ಉದ್ಯೋಗದಲ್ಲಿ ಸಾಕಷ್ಟು ಸಂಪಾದನೆಯಾಗಿ ಜನ ಸುಭಿಕ್ಷೆಯಿಂದ ಇರಬೇಕು ಜನ ಒಳ್ಳೆ ರೀತಿಯಿಂದ ಜೀವನ ಸಾಗಿಸುವಂತಾಗಬೇಕು. ದೇವರ ಅನುಗ್ರಹ ಎಲ್ಲರ ಮೇಲೆ ಇರಬೇಕು ಎಂಬ ಸಂಕಲ್ಪದಿಂದ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶಶಾಂಕ್ ಜೆ. ಕೊಟೇಚಾ, ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ
ಶ್ರೀನಿವಾಸ್, ನೀಲಂತ ಕುಮಾರ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮತ್ತು ಸಮಿತಿಯ ಸದಸ್ಯರು ಉಪಸ್ತಿತರಿದ್ದರು.