ನೆಲ್ಲೂರು: ತಾಯಿ ಮತ್ತು ಮಗು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆಯೊಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿ ನಡೆದಿದೆ.
ಮಾಪಲಕಜೆಯ ಜನಾರ್ಧನ ನಾಯಕ್ ಎಂಬವರ ಪುತ್ರಿ ಸಂಗೀತರವರ ಮಗು ಮನೆಯ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ತಾಯಿ ಸಂಗೀತ ರವರು ಪ್ರಯತ್ನಿಸುವ ಸಂದರ್ಭ ಈಜು ಬಾರದ ಅವರು ಕೂಡಾ ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟರೆನ್ನಲಾಗಿದೆ.
ತಾಯಿಯ ಮೃತದೇಹ ಕೆರೆಯಿಂದ ಹೊರತೆಗೆಯಲಾಗಿದ್ದು, ಮಗುವಿನ ದೇಹಕ್ಕಾಗಿ ಅಗ್ನಿಶಾಮಕ ದಳದವರು ಹುಡುಕಾಟ ಮಾಡುತ್ತಿದ್ದಾರೆ.