ಮಾಣಿ: ಹಿಂದೂ ಜಾಗರಣ ವೇದಿಕೆ ಮಾಣಿ ಘಟಕದ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮವೂ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಆ.೧೧ ರಂದು ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕರ್ತರಾದ ತೋಟ ನಾರಾಯಣ ಶೆಟ್ಟಿ ಅವರು ವಹಿಸಿದ್ದರು. ಹಿಂದು ಜಾಗರಣ ವೇದಿಕೆಯ ಪ್ರಾಂತ ನ್ಯಾಯ ಜಾಗರಣದ ಸಂಯೋಜಕರಾದ ಅರುಣ್ ಗಣಪತಿ ಭಟ್ ಬೌದ್ಧಿಕ್ ನೀಡಿದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ಮಾಣಿ ಘಟಕದ ಅಧ್ಯಕ್ಷರಾದ ಭರತ್ ಶೆಟ್ಟಿ ಮಾಣಿ ಉಪಸ್ಥಿತರಿದ್ದರು.
ದೀಪ ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಗಂಗಾಧರ ಗೌಡ ಮಾಣಿ ವಂದೇ ಮಾತರಂ ಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀ ಶಾರದಾ ಯುವ ವೇದಿಕೆ ಹಾಗೂ ಭಜನಾ ಮಂದಿರದ ಕಾರ್ಯಕರ್ತರು ಉಪಸ್ಥಿತರಿದ್ದರು.