ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ದ್ವಜಾರೋಹಣ ಪುತ್ತೂರು ಮಂಡಲ ಕೈಗಾರಿಕಾ ಪ್ರಕೋಷ್ಟ ಇದರ ಸಂಚಾಲಕರಾದ , ವಿಘ್ನೇಶ್ ಮಡ್ ಬ್ಲಾಕ್ ಇದರ ಮಾಲಕರಾದ ಚಿದಾನಂದ ರೈ ದ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಸುಧಾಕರ್ ನ್ಯಾಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲ ಅಧ್ಯಕ್ಷ ಜನಾರ್ಧನ ಪೆರಳ್ತಡಿ, ಕಾರ್ಯದರ್ಶಿ ಸುರೇಂದ್ರ ಕೆಮ್ಮಾಯಿ , ಮಾಜಿ ಅಧ್ಯಕ್ಷರುಗಳಾದ, ಪ್ರವೀಣ್ ನ್ಯಾಕ್, ಪ್ರಕಾಶ್ ಬೋವುದಕಾಡು, ಲಿಂಗಪ್ಪ ಗೌಡ, ಯಶವಂತ್, ಮಂಜುನಾಥ್ ಕೆಮ್ಮಾಯಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹರ್ಷಿತಾ, ದೀಪ್ತಿ, ದೀಕ್ಷಾ, ಭಾವನ ಧ್ವಜಾಗೀತೆ ಹಾಡಿದರು.
ಯುವಕ ಮಂಡಲದ ಗೌರವ ಅಧ್ಯಕ್ಷರಾದ ಅಣ್ಣಿ ಪೂಜಾರಿ ಸ್ವಾಗತಿಸಿದರು.ಪ್ರಶಾಂತ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು.