ಸುಬ್ರಹ್ಮಣ್ಯ: ಹೆಸರಾಂತ ವೈದ್ಯ, ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಡಾ. ಬಿ ಕೆ ಭಟ್ ( 60) ನಿನ್ನೆ ತಡ ರಾತ್ರಿ ನಿಧನರಾಗಿರುವುದಾಗಿ ವರದಿಯಾಗಿದೆ.
ನ್ಯೂಮೋನಿಯಾ ಇದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತಿದ್ದು ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತೆನ್ನಲಾಗಿದೆ. ಮೃತರು ಪತ್ನಿ, ಒರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿರುವುದಾಗಿ ತಿಳಿದು ಬಂದಿದೆ.
ಮದ್ಯಾಹ್ನ ಪಾರ್ಥಿವ ಶರೀರ ಸುಬ್ರಹ್ಮಣ್ಯಕ್ಕೆ
ಇಂದು ಅಪರಾಹ್ನ ಸುಬ್ರಹ್ಮಣ್ಯದ ಇಂಜಾಡಿ ಬಳಿಯಿರುವ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಇವರ ಪಾರ್ಥಿವ ಶರೀರ ಸುಬ್ರಹ್ಮಣ್ಯಕ್ಕೆ ಬಂದು ತಲುಪಲಿದ್ದು ಅಂತಿಮ ದರ್ಶನಕ್ಕಾಗಿ ಅವಕಾಶವಿದೆ ಎಂದು ತಿಳಿದು ಬಂದಿದೆ. ಕುಮಾರಧಾರದಿಂದ ಆಂಬ್ಯುಲೆನ್ಸನ್ನು ವಾಹನದ ಮೆರವಣಿಗೆ ಮೂಲಕ ಇಂಜಾಡಿ ಸ್ಮಶಾನದ ಬಳಿ ತರಲಿದ್ದಾರೆ ಎಂದು ತಿಳಿದು ಬಂದಿದೆ.