ಮಂಗಳೂರು: ನಿನ್ನೆಯಷ್ಟೇ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬರು ನ್ಯಾಯಾಯಲದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಮೃತಪಟ್ಟ ವ್ಯಕ್ತಿ.
ರವಿರಾಜ್’ರನ್ನು ಉಳ್ಳಾಲ ಪೊಲೀಸರು ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೋಮವಾರ ಬಂಧಿಸಿದ್ದರು. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಇವರು ಸೈಕಲಿನಲ್ಲಿ ತೆರಳುತಿದ್ದ ಬಾಲಕಿಯನ್ನು ಅಡ್ಡಗಟ್ಟಿ, ನಿಲ್ಲಿಸಿ ಕಿರುಕುಳ ನೀಡಿದ್ದರು ಎಂದು ಆರೋಪಿಲಾಗಿತ್ತು .ಕೃತ್ಯ ಸೋಮವಾರ ಹಗಲು ಹೊತ್ತಿನಲ್ಲಿ ತೊಕ್ಕೊಟ್ಟು ಸೆಬೆಸ್ಟಿಯನ್ ಕಾಲೇಜು ಬಳಿ ನಡೆದಿತ್ತು.
ಮಂಗಳವಾರ ಆರೋಪಿ ರವಿರಾಜ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿತ್ತು . ಹಾಜರು ಪಡಿಸಿದ ಬಳಿಕ ಆರೋಪಿಗೆ ಹೊರಗೆ ಬಂದು ಕುಳಿತುಕೊಳ್ಳುವಂತೆ ಪೊಲೀಸರು ಸೂಚಿಸಿದ್ದರು. ಅವರ ಪರ ವಕೀಲರು ಅಗ ಇವರ ಬಳಿಯೇ ನಿಂತಿದ್ದರು. ಈ ವೇಳೆ ರವಿರಾಜ್ ಏಕಾಏಕಿ ಓಡಿ ಹೋಗಿ ಲಿಫ್ಟ್ ಇರುವ ಸಮೀಪವೇ ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಗಂಭೀರ ಗಾಯಗೊಂಡ ಆರೋಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾನು ಯಾವುದೇ ತಪ್ಪು ಮಾಡಿಲ್ಲ ತನ್ನನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಮನನೊಂದು ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.