ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರು ನಗರದ ಸಾಮೆತಡ್ಕ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಐತಪ್ಪ ಆಚಾರ್ಯ, ಜೇರೋಮ್ ಪುಡ್ತಾದೊ ಕಜೆ, ಜಾನ್ ಪೀಟರ್ ಡಿ ಸಿಲ್ವ ಗುಡ್ಡೆ (ವಲ್ಲು ), ಶ್ರೀಮತಿ ಫ್ಲಾನ್ಸಿ ಸುವಾರಿಸ್, ಮಾಜಿ ನಗರ ಸಭಾ ಸದಸ್ಯೆ ಶ್ರೀಮತಿ ಉಷಾ ಧನಂಜಯ ಆಚಾರ್ಯ, ಸುನಿಲ್ ಮಸ್ಕೇರೇನಸ್, ಮೆಲ್ವಿನ್ ಮಸ್ಕೇರೇನಸ್, ಸುರೇಶ ಸಾಲಿಯಾನ್, ಶಿರಾಜ್ ಸಾಮೆತಡ್ಕ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಈಶ್ವರ ಬೆಡೇಕರ್ ರವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ್ ರೈ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದ್ ಆಲಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನಸ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಕೋವಿಡ್ ಸೇವಕ್ ಸಿಮ್ರಾನ್ ನಝೀರ್ ಉಪಸ್ಥಿತರಿದ್ದರು.

