ಪುತ್ತೂರು: ಒಂದಲ್ಲಾ ಒಂದು ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಜೋಡಿಸಿಕೊಳ್ಳುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸೆ.೮ ರಂದು ಜರುಗಿದ ಲಕ್ಷ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದರು. ಪಾಣಾಜೆ, ಸರ್ವೆ ಮತ್ತು ಪಾಲ್ತಾಡಿ ಆರೋಗ್ಯ ಕೇಂದ್ರಗಳ ವಿವಿಧ ಲಸಿಕಾ ಕೇಂದ್ರಗಳಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆಗೆ ಕೈ ಜೋಡಿಸುವ ಮುಖಾಂತರ ಸ್ವಯಂಸೇವಕರು ಸಾರ್ವಜನಿಕರಲ್ಲಿ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು ಅಲ್ಲದೆ ಸಾರ್ವಜನಿಕರು ಲಸಿಕೆ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಹಾಗೆ ಪ್ರೇರಣೆ ನೀಡಿದರು.
ಬೆಟ್ಟಂಪಾಡಿ ಕೇಂದ್ರದಲ್ಲಿ ಅಂಕಿತ್ ಕೆ ಆರ್ ಮತ್ತು ರಕ್ಷಿತ್ ರೈ, ಪಾಣಾಜೆ ಕೇಂದ್ರದಲ್ಲಿ ಕಾವ್ಯ ಕೆ, ಪ್ರಜ್ಞ ಕುಮಾರಿ ಬಿ ಮತ್ತು ನವನೀತಾ ಕೆ, ನಿಡ್ಪಳ್ಳಿ ಕೇಂದ್ರದಲ್ಲಿ ಮಿಥುನ್ ರಾಜ್ ಮತ್ತು ಪ್ರತೀಕ್ಷಾ, ಇರ್ದೆ ಕೇಂದ್ರದಲ್ಲಿ ಧನ್ಯ ಸಿ ಹೆಚ್, ಪುಣ್ಯಶ್ರೀ ರೈ ಜಿ, ಸಿಂಚನ ಮತ್ತು ಯಶ್ಮಿತಾ, ಬಲ್ನಾಡು ಕೇಂದ್ರದಲ್ಲಿ ಮೃದುಲಾ ಬಿ, ರಶ್ಮಿತಾ ಕೆ ಮತ್ತು ಪೂಜಾ, ಕಬಕ ಕೇಂದ್ರದಲ್ಲಿ ವೀಣಾ ಕುಮಾರಿ ಮತ್ತು ನಿಧಿ, ಬೆಳಿಯೂರ್ ಕಟ್ಟೆ ಕೇಂದ್ರದಲ್ಲಿ ಜಯಶ್ರೀ ಮತ್ತು ಜಲಜಾಕ್ಷಿ, ಕೊಡಿಪ್ಪಾಡಿ ಕೇಂದ್ರದಲ್ಲಿ ಸಾರ್ಥಕ್ ಟಿ ಮತ್ತು ದೀಕ್ಷಿತ್ ಕುಮಾರ್, ಮುಂಡೂರು ಕೇಂದ್ರದಲ್ಲಿ ಅಕ್ಷತಾ ಮತ್ತು ಭಾರತಿ, ಶಾಂತಿಗೋಡು ಕೇಂದ್ರದಲ್ಲಿ ಧನ್ಯಶ್ರೀ ಶೆಟ್ಟಿ ಎ, ಸುಭದ್ರಾ ಹಾಲ್ ಪುತ್ತೂರು ಕೇಂದ್ರದಲ್ಲಿ ನಿತಿನ್ ಪಿ ಮತ್ತು ಪ್ರದೀಪ್ ಕುಮಾರ್, ಕಾವು ಕೇಂದ್ರದಲ್ಲಿ ಹರ್ಷಿತಾ ಎಮ್ ಮತ್ತು ದೀಕ್ಷಿತಾ ಎಸ್, ಕೈಕಾರ ಕೇಂದ್ರದಲ್ಲಿ ಪೂಜಾ ಹಾಗೂ ಮುಕ್ವೆ ಕೇಂದ್ರದಲ್ಲಿ ರಂಜಿತಾ ಜಿ, ಚೈತ್ರಾ ಬಿ ಮತ್ತು ಕವನ ಇವರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್ ಮತ್ತು ಶಶಿಕುಮಾರ ಅವರ ಮಾರ್ಗದರ್ಶನದೊಂದಿಗೆ ಕಾರ್ಯಪ್ರವೃತ್ತರಾದ ಸ್ವಯಂ ಸೇವಕರ ತಂಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗಗಳ ಮೆಚ್ಚುಗೆಗೆ ಪಾತ್ರವಾಯಿತು.