ಮಂಗಳೂರು: ಕರಾವಳಿಯಲ್ಲಿ ಪಿಲಿನಲಿಕೆ ಎಂದರೆ ಸ್ಟೆಪ್ ಹಾಕದ ಜನರಿಲ್ಲ, ಪಿಲಿನಲಿಕೆ ತಾಸೆಯ ಶಬ್ದ ಕರಾವಳಿಯಲ್ಲಿ ಬಹು ಫೇಮಸ್, ಮೆಹೆಂದಿಯಿಂದ ಹಿಡಿದು ಎಲ್ಲಾ ಡಿಜೆ ಮೆರವಣಿಗೆಗಳಲ್ಲಿ ಇದು ಕಾಣ ಸಿಗುತ್ತದೆ.
ಇಂತಹ ಪಿಲಿನಲಿಕೆ ಸಾಂಗ್ ಈ ಬಾರಿ ಐಪಿಎಲ್ ನಲ್ಲಿ ಸದ್ದು ಮಾಡಿದೆ, ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೆಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ನಿನ್ನೆ ಶಾರ್ಜಾದಲ್ಲಿ ನಡೆದಿದ್ದು, ಈ ವೇಳೆ ಪಂದ್ಯ ವೀಕ್ಷಿಸಲು ಆಗಮಿಸಿದ ಕರಾವಳಿಯ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಾ ಪಿಲಿನಲಿಕೆಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ.
ಆರ್ ಸಿಬಿ – ಸಿಎಸ್ ಕೆ ಪಂದ್ಯದ ವೇಳೆ ಹುಲಿ ಕುಣಿತದ ಹಾಡಿಗೆ ಆರ್ ಸಿಬಿ ಅಭಿಮಾನಿಗಳು ಮನಸೋ ಇಚ್ಛೆ ಕುಣಿದಿದ್ದಾರೆ. ಯುವಕರು- ಯುವತಿಯರು ಸೇರಿದಂತೆ ಆರ್ ಸಿಬಿ ಅಭಿಮಾನಿಗಳು ಹುಲಿ ಕುಣಿತವಾಡಿದ ವಿಡಿಯೋ ಈಗ ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ…