ಪುತ್ತೂರು: ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು-ಕೋಡಿಂಬಾಡಿ ಇಲ್ಲಿ ಅ.7 ರಿಂದ ಅ.15 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯೊಂದಿಗೆ ನವರಾತ್ರಿ ಉತ್ಸವ ನಡೆಯಲಿದೆ.
ಅ.7 ರಿಂದ ಅ.15ರ ವರೆಗೆ ನವರಾತ್ರಿ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಭಜನಾ ಸೇವೆಗಳು, ರಂಗಪೂಜೆ, ಹೂವಿನ ಪೂಜೆ,ದೀಪೋತ್ಸವ, ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ವಿವಿಧ ಪೂಜೆಗಳು, ಅನ್ನದಾನ ಸೇವೆ ನೆರವೇರಲಿದೆ ಎಂದು ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.