ಉಡುಪಿ: ಹೊಳೆಯಲ್ಲಿ ಮೀನಿಗೆ ಗಾಳ ಹಾಕಲು ಹೋಗಿದ್ದ ದೈವ ನರ್ತಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾದ ಘಟನೆ ಶಿರ್ವ ನಡಿಬೆಟ್ಟು ಅಣೆಕಟ್ಟು ಬಳಿ ಅ.10 ರಂದು ಸಂಜೆ ನಡೆದಿದೆ.
ಶಿರ್ವ ಮಟ್ಟಾರು ನಿವಾಸಿ ದಿಲೀಪ್ (33) ಮೃತ ದುರ್ದೈವಿ. ಮೂರು ಮಂದಿಯ ತಂಡ ಮೀನಿನ ಗಾಳ ಹಾಕಲು ಹೊಳೆ ಬದಿಗೆ ಬಂದಿದ್ದು. ಈ ಪೈಕಿ ದಿಲೀಪ್ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ದಿಲೀಪ್ ಚಿಕ್ಕ ವಯಸ್ಸಿನಲ್ಲೇ ಕರಾವಳಿಯಾದ್ಯಂತ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ,ಸೇವಕರಾಗಿ ಪ್ರಸಿದ್ದಿಯನ್ನು ಪಡೆದವರು. ಬಬ್ಬು ಸ್ವಾಮಿ ದೈವದ ನರ್ತಕರಾಗಿ ಅತೀ ಹೆಚ್ಚು ಪ್ರಸಿದ್ದಿಗಳಿಸಿದ್ದರು.
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿ ಕಾರ್ಯಚರಣೆ ನಡೆಸಿದ್ದಾರೆ. ತಡರಾತ್ರಿ ವರೆಗರ ಕಾರ್ಯಚರಣೆ ಮುಂದುವರಿದಿದ್ದು, ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಕಿನ ಅಡಚನೆಯಿಂದಾಗಿ ಕಾರ್ಯಚರಣೆ ಸ್ಥಗಿತಗೊಂಡಿದ್ದು, ಇಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಆರಂಭಗೊಂಡಿದೆ.