ಪುತ್ತೂರು: ತಾಲೂಕು ಮದ್ಯ ಮಾರಾಟಗಾರರ ಸಂಘದ 2020-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಪುತ್ತೂರು ರೋಟರಿ (ಪೂರ್ವ) ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಆಯ್ಕೆಯಾದರು.
ಸಂಘದ ಪದಾಧಿಕಾರಿಗಳ ವಿವರ:
- ಗೌರವಾಧ್ಯಕ್ಷರಾಗಿ – ಉದ್ಯಮಿ ಸವಣೂರು ಕೆ. ಸೀತಾರಾಮ ರೈ,
- ಉಪಾಧ್ಯಕ್ಷರಾಗಿ- ಕರುಣಾಕರ್ ಸುವರ್ಣ ಉಪ್ಪಿನಂಗಡಿ,
- ಪ್ರಧಾನ ಕಾರ್ಯದರ್ಶಿಯಾಗಿ – ಪುತ್ತೂರು ನಗರ ಸಭಾ ಸದಸ್ಯ ಬಾಲಚಂದ್ರ ಕೆ.
- ಜೊತೆ ಕಾರ್ಯದರ್ಶಿಯಾಗಿ – ಉದಯ ರೈ,
- ಕೋಶಾಧಿಕಾರಿಯಾಗಿ – ವಿನೋದ್ ಎ.
- ಕಾರ್ಯಕಾರಿ ಸಮಿತಿಗೆ – ಸುನಿತ್ ಸಾಲ್ಯಾನ್, ಎಸ್. ಬಿ. ಜಯರಾಮ್ ರೈ ಬಳೆಜ್ಜ, ನವೀನ್‌ಚಂದ್ರ ನಾಯಕ್, ರವಿಶಂಕರ್ ಶೆಡ್ಡೆ, ಎ. ಸಂತೋಷ್ ಕುಮಾರ್ ಪುತ್ತೂರು ಆಯ್ಕೆಯಾದರು.
ಪುರಂದರ ರೈ
ಸಂಘದ ಅಧ್ಯಕ್ಷ ಸಂತೋಷ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಸೆ.19 ರಂದು ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸೀತಾರಾಮ ರೈ
ಸಂಘದ ಜಿಲ್ಲಾ ಅಧ್ಯಕ್ಷ ಗಣೇಶ ಶೆಟ್ಟಿ, ಜಿಲ್ಲಾ ಕಾರ್‍ಯದರ್ಶಿ ಪಿ.ಎನ್. ಅಪ್ಪಚ್ಚು, ಮಂಗಳೂರು ಮದ್ಯ ಮಾರಾಟಗಾರರ ಸಣಂಘದ ಅಧ್ಯಕ್ಷ ಹಾಗೂ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯ ಕೆ.ಟಿ. ಸುವರ್ಣ ಮಂಗಳೂರು, ಸುನಿತ್ ಕಿಶನ್ ಉಪಸ್ಥಿತರಿದ್ದರು. ಸಂಘದ ಕಾರ್‍ಯದರ್ಶಿ ವಿನೋದ್ ಎ. ಸ್ವಾಗತಿಸಿ, ವಂದನಾರ್ಪಣೆಗೈದರು.
ಕರುಣಾಕರ್ ಸುವರ್ಣ
ಬಾಲಚಂದ್ರ
ವಿನೋದ್