ಉಪ್ಪಿನಂಗಡಿ: ರಸ್ತೆ ದುರಸ್ಥಿ ಸಂದರ್ಭದಲ್ಲಿ ವ್ಯಕ್ತಿಯೋರ್ವ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಇನ್ನೋರ್ವ ವ್ಯಕ್ತಿ ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಜನನಿ ನಿವಾಸಿ ಕೃಷ್ಣ ಎನ್. ದೂರುದಾರರು. ಆರೋಪಿಯನ್ನು ಶುಶ್ರುತ ಕೃಷ್ಣ ಎನ್ನಲಾಗಿದೆ.
ಜು.9 ರಂದು ಕುಪ್ಪೆಟ್ಟಿ-ಮುಂಡ್ರಟ್ಟು ರಸ್ತೆ ರಿಪೇರಿ ಮಾಡುವ ಸಂದರ್ಭದಲ್ಲಿ ಆರೋಪಿ ಶುಶ್ರುತ ಕೃಷ್ಣ, ಕೃಷ್ಣ ಎನ್. ರವರ ಜಾತಿ ಬಗ್ಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದು, ಅ.12 ರಂದು ಕಣಿಯೂರು ಗ್ರಾಮ ಸಭೆಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಕೃಷ್ಣ ಎನ್. ರವರ ಜಾತಿ ಬಗ್ಗೆ ಮತ್ತೆ ನಿಂದಿಸಿ, ಅ.30 ರಂದು ನಡೆಯುವ ಗ್ರಾಮ ಸಭೆಯಲ್ಲಿ ಆಂಬುಲೆನ್ಸ್ ತಂದಿಡಿ ಅವನಿಗೆ ಒಂದು ವ್ಯವಸ್ಥೆ ಮಾಡಲು ಕಾಯುತ್ತಿದ್ದೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 114/2021 ಕಲಂ: 506 ಐಪಿಸಿ ಮತ್ತು ಕಲಂ 3(1)(r),(s) scheduled castes and Scheduled Tribes(Prevention of Atrocities) Amendment Ordinance 2014 ರಂತೆ ಪ್ರಕರಣ ದಾಖಲಾಗಿದೆ.