ಕಡಬ: ಸುಬ್ರಮಣ್ಯ – ಮಂಗಳೂರು ರೈಲ್ವೆಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ.
ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣದಿಂದ( ಸುಬ್ರಹ್ಮಣ್ಯ ರೋಡ್) ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ರೈಲಿನ ಒಂದು ಬೋಗಿ ಚಲಿಸಿದ ಬಳಿಕ ಚಾಲಕನ ಗಮನಕ್ಕೆ ಬಂದಿದ್ದು, ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ, ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಶೀಘ್ರ ಕಾರ್ಯಾಚರಣೆ ನಡೆಸಿ ಹಳಿ ದುರಸ್ಥಿ ನಡೆಸಿ ನಂತರ ರೈಲು ಸಂಚರಿಸಲು ಅವಕಾಶ ನೀಡಲಾಯಿತು. ಚಾಲಕನ ಸಮಯ ಪ್ರಜ್ಞೆಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.