ಮಂಗಳೂರು: ದಿಯಾ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಸ್ಥಾಪಕ ಡಾ. ರವಿಚಂದ್ರನ್ ರವರು ನ.12 ರಂದು ನಿಧನರಾದರು.
ಮಂಗಳೂರು ಮೂಲದ ಡಾ. ರವಿಚಂದ್ರನ್ ರವರು ಎರಡು ವರ್ಷದ ಹಿಂದೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅಮೇರಿಕಾದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನರಾದರು.
ಇವರು ತಾಂತ್ರಿಕತೆಯ ಉದ್ಯಮದ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು. ಇವರ ಸಾಧನೆಗೆ ಭಾರತೀಯ ಉದ್ಯೋಗ ರತ್ನ ಅವಾರ್ಡ್, ಅಲೋಷಿಯನ್ ಅಲ್ಯುಮಿನಿ ಅವಾರ್ಡ್, ಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, 2016ರ ಸ್ಪಂದನ ಎಂಟರ್‌ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗಳು ದೊರೆತ್ತಿದ್ದವು.
ಮೃತರು ಪತ್ನಿ ಇಂದಿರಾ, ಪುತ್ರಿ ವಿದ್ಯಾ ಹಾಗೂ ಪುತ್ರ ಹರಿ ರನ್ನು ಅಗಲಿದ್ದಾರೆ.