ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಇದರ ಕಲ್ಲಡ್ಕ ವಲಯ ಕಾರ್ಯಕ್ಷೇತ್ರ ವ್ಯಾಪ್ತಿಯ ಶ್ರೀ ಲಕ್ಷ್ಮೀ ಸನ್ನಿಧಿ ಜ್ಞಾನ ವಿಕಾಸ ಕೇಂದ್ರ ವತಿಯಿಂದ ಆಯೋಜಿಸಲಾದ ‘ಪೌಷ್ಠಿಕ ಆಹಾರ ಮೇಳ’ ಕಾರ್ಯಕ್ರಮವು ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಯೋಜನೆಯ ಕಲ್ಲಡ್ಕ ಒಕ್ಕೂಟದ ಅಧ್ಯಕ್ಷರಾದ ತುಳಸಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷರಾದ ನಾಗೇಶ್ ರವರು ನಮ್ಮ ಮನೆಯ ಅಡುಗೆ ತಯಾರಿಯೇ ನಮ್ಮ ಆರೋಗ್ಯ ನಮ್ಮ ಶರೀರದಲ್ಲಿರುವ ಪ್ರತೀ ಭಾಗಗಳಿಗೂ ಒಂದೊಂದು ರೀತಿಯಾದ ಪೌಷ್ಠಿಕ ಆಹಾರ ದ ಅವಶ್ಯಕತೆ ಇದೆ. ಅದು ಈ ರೀತಿಯ ಕಾರ್ಯಕ್ರಮದ ಮೂಲಕ ಮೂಲಕ ಮಾಹಿತಿ ತಿಳಿಯಲು ಸಹಕಾರಿಯಾಗಿದೆ. ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮ ಅತೀ ಉತ್ತಮ ಕಾರ್ಯಕ್ರಮ ಮಹಿಳೆಯರನ್ನು ಒಂದು ಕಡೆ ಸೇರಿಸುವುದು ಬಹಳ ಕಷ್ಟದ ಕೆಲಸ. ಈ ರೀತಿ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಧರ್ಮಸ್ಥಳ ಸಂಸ್ಥೆ ಯಿಂದ ಮಾತ್ರ ಸಾದ್ಯ ಅದರಿಂದ ಇಂಥ ಕಾರ್ಯಕ್ರಮ ಹೆಚ್ಚು ಹೆಚ್ಚು ಮಾಡುವುದ ರಿಂದ ಮಹಿಳೆಯರಿಗೆ ಇನ್ನೂ ಅನುಕೂಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಾಳ್ತಿಲ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಜಯಂತಿ ರವರು ಮಾತನಾಡಿ, ನಮ್ಮ ದೇಹಕ್ಕೆ ಎಲ್ಲಾ ರೀತಿಯ ವಿಟಮಿನ್ಸ್ ಪ್ರೊಟೀನ್ ಅಗತ್ಯವಿದೆ ಆದರೆ ನಾವು ದಿನ ನಿತ್ಯ ಆಹಾರ ಸೇವನೆಯಲ್ಲಿ ಒಂದೇ ರೀತಿಯಾದ ಆಹಾರ ತಯಾರಿ ಮಾಡುತ್ತೇವೆ. ಬೆಳಿಗ್ಗೆ ದೋಸೆ ಮಧ್ಯಾಹ್ನ ದೋಸೆ ಸಂಜೆ ದೋಸೆ ಅದಲ್ಲದಿದ್ದರೆ ಬೆಳಿಗ್ಗೆ ಅನ್ನ ಸಂಜೆ ಅನ್ನ ಮದ್ಯಾಹ್ನ ಅನ್ನ ಈ ರೀತಿಯಾದ ಆಹಾರ ಪದ್ಧತಿ ಯಿಂದ ನಾವು ಬಿಪಿ ಶುಗರ್ ಇಂಥ ಖಾಯಿಲೆ ಗೆ ಒಳಗಾಗುತ್ತೇವೆ ಆದ್ದರಿಂದ ಇವತ್ತು ಈ ಆಹಾರ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟ ಆಹಾರವನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಆಹಾರ ವನ್ನಾಗಿ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಜ್ಞಾನವಿಕಾಸ ಕೇಂದ್ರದ ಸದಸ್ಯರು ವಿವಿಧ ರೀತಿಯ ಆಹಾರವನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಪ್ರದರ್ಶನಕ್ಕಿಟ್ಟು ಅದರ ಮಾಹಿತಿ ನೀಡಿದರು. ಉತ್ತಮವಾಗಿ ಪೌಷ್ಟಿಕ ಆಹಾರ ತಯಾರಿಸಿದ ಸಂಘ ಹಾಗೂ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕರು ಸುಗುಣ ಶೆಟ್ಟಿ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ ,ಝಾನ್ಸಿರಾಣಿ ಮಹಿಳಾ ಮಂಡಳಿ ಅಧ್ಯಕ್ಷ ಮೀನಾಕ್ಷಿ , ಸೇವಾಪ್ರತಿ ನಿಧಿ ಸೌಮ್ಯ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಅರುಣ ಸ್ವಾಗತಿಸಿ, ವಿಧ್ಯಾ ನಿರೂಪಿಸಿ ಸೇವಾ ಪ್ರತಿನಿಧಿ ಸೌಮ್ಯ ವಂದಿಸಿದರು.