ಪುತ್ತೂರು: ಜೈ ಭಾರತ್ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಧನ್ಯಕುಮಾರ್ ಬೆಳಂದೂರು ಪುನರಾಯ್ಕೆಗೊಂಡಿದ್ದಾರೆ. ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಜಿ.ಕಬಕ ಆಯ್ಕೆಯಾಗಿದ್ದಾರೆ.
ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ನ.25 ರಂದು ಪುತ್ತೂರು ಬೈಪಾಸ್ ರಸ್ತೆಯ ಅಶ್ಮಿ ಕಂಫಟ್ ನಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷರಾಗಿ ರಹೀಮ್ ಆರ್ಲಪದವು, ಜೊತೆಕಾರ್ಯದರ್ಶಿಯಾಗಿ ಮಾಧವ ನಾಯಕ್ ಮತ್ತು ಲಿಂಗಪ್ಪ ಸಂಪ್ಯ, ಖಜಾಂಚಿಯಾಗಿ ದಿನೇಶ್
ಕುಮಾರ್ ಮಡ್ಯಂಗಳ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ತಾಲೂಕಿನ ಎಲ್ಲಾ ಲಾರಿ ಮಾಲಕರು ಚಾಲಕರು ಸಭೆಯಲ್ಲಿ ಉಪಸ್ಥಿತರಿದ್ದರು.