ಪುತ್ತೂರು: ರಾಜ್ಯ ಸರಕಾರಿ/ನೌಕರರಿಗೆ ಪುತ್ತೂರು ಜೆ.ಸಿ.ಐ. ಘಟಕದ ವತಿಯಿಂದ ಇಲಾಖಾ ಪರೀಕ್ಷಾಪೂರ್ವ ತಯಾರಿಗೆ ಉಚಿತ ತರಬೇತಿಯನ್ನು ನ.28 ರಂದು ಏರ್ಪಡಿಸಲಾಗಿದೆ.
ರಾಜ್ಯ ಸರಕಾರದ ಅಧಿಕಾರಿ/ನೌಕರರಿಗೆ 2021ನೇ ಸಾಲಿನ ಅಧಿವೇಶನದ ಇಲಾಖಾ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ಜ.4 ರಿಂದ ಪ್ರಾರಂಭಿಸಲು ನಿರ್ಧರಿಸಿರುವುದರಿಂದ ಇದರ ಪೂರ್ವಭಾವಿ ತಯಾರಿಗೆ ಉಚಿತ ತರಬೇತಿ ತರಗತಿಯನ್ನು ಪುತ್ತೂರು ಘಟಕದ ಜೆ.ಸಿ.ಎ. ವತಿಯಿಂದ ನ.23 ರಂದು ಪುತ್ತೂರು ಕೋರ್ಟ್
ರೋಡ್ ಬಳಿಯ ಮುಳಿಯ ಜ್ಯುವೆಲ್ಲರಿ ಅಂಗಡಿಯ ಸಮೀಪದ ಇಂಡಿಯನ್ ಆರ್ಕೇಡ್ ಕಟ್ಟಡದಲ್ಲಿರುವ
ಜೆ.ಸಿ.ಐ, ಹಾಲ್ ನಲ್ಲಿ ಪ್ರಾರಂಭಿಸಲಾಗುವುದು.
ಆಸಕ್ತ ಸರಕಾರಿ ಅಧಿಕಾರಿ/ನೌಕರರು ತರಗತಿಗೆ ಹಾಜರಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಎಂದು ಪುತ್ತೂರು ಘಟಕದ ಜೆ.ಸಿ.ಐ.ಯ ಅಧ್ಯಕ್ಷೆ ಜೆ.ಸಿ. ಸ್ವಾತಿ ಜಗನ್ನಾಥ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.