ಮಂಗಳೂರು: ನಗರದ ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ , ಅಪವಿತ್ರಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರನ್ನು ಕಾವೂರಿನ ಶಾಂತಿನಗರ ಮಸೀದಿ ಬಳಿಯ ಸಫ್ವಾನ್ ಯಾನೆ ಚಪ್ಪು ( 25 ), ಶಾಂತಿನಗರದ ಮೊಹಮ್ಮದ್ ಸುಹೈಬ್ (23), ನಿಖಿಲೇಶ್ (23) ಕುಳೂರು ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ (27 ), ಸುರತ್ಕಲ್ ನ ಜಯಂತ್ ಕುಮಾರ್ ( 30) ಬಂಟ್ವಾಳದ ಪಡೂರು ಗ್ರಾಮದ ಪ್ರತೀಕ್ (24 ) ಕೂಳೂರು ಪಡುಕೋಡಿ ಗ್ರಾಮದ ಮಂಜುನಾಥ್ ಪೂಜಾರಿ (30) ಹಾಸನದ ಬೇಲೂರಿನ ನೌಷದ್ ಅರೇಹಳ್ಳಿ(30) ಎನ್ನಲಾಗಿದೆ.
ಕೋಮು ಸೌಹಾರ್ದತೆ ಕದಡಲು ಸಂಚು ರೂಪಿಸಿದ್ದ ಇವರು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಕೋಟ್ಯಾನ್ ಕುಟುಂಬದ ನಾಗಬನ ಅ.21 ರಂದು ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನು ಅಪವಿತ್ರಗೊಳಿಸಿದ್ದರು. ನ.12 ರಂದು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ದ ನಾಗಬನ ದ ಮೂರ್ತಿಗಳನ್ನು ಕಿತ್ತೆಸೆದು ಹಾನಿಗೊಳಿಸಿ ಅಪವಿತ್ರಗೊಳಿಸಿದ್ದರು.
ಈ ಕೃತ್ಯಕ್ಕೆ ಸಹಕರಿಸಿದ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಇತರ ವ್ಯಕ್ತಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.