ಬೆಳ್ತಂಗಡಿ: ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ಗೆ ಎಸಿಬಿ ತಂಡವೊಂದು ದಿಢೀರ್ ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದ ಘಟನೆ ಡಿ.13 ರಂದು ನಡೆದಿದೆ.
ಮಾಲಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ
ವ್ಯಕ್ತಿಯೋರ್ವರಿಂದ ಪಂಚಾಯತ್ ಆಸ್ತಿ ದಾಖಲೆ ಇ ಸ್ವತ್ತು 9 ಮತ್ತು 11 ಎ ನಮೂನೆಯನ್ನು ನೀಡಲು ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ ನಡೆಸಿದ್ದಾರೆ.
ಇದೀಗ ಭ್ರಷ್ಟಾಚಾರ ನಿಗ್ರಹದಳ ತಂಡ ಪಿಡಿಒ ರವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.