ಸುಳ್ಯ: ಬಸ್ ಅನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಕಾರು ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಘಟನೆ ಜಾಲ್ಸೂರು ಗ್ರಾಮದ ಕಾಳಮ್ಮನೆಯಲ್ಲಿ ನಡೆದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಅತೀ ವೇಗವಾಗಿ ಬಂದು ಬಸ್ಸೊಂದನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಪೈಚಾರಿನಿಂದ ಜಾಲ್ಸೂರಿಗೆ ತೆರಳಿತ್ತಿದ್ದ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಪ್ರಯಾಣಿಕರುಗಳಾದ ಪೈಚಾರಿನ ಉಮೇಶ್ ಗೌಡ ಹಾಗೂ ರಾಘವೇಂದ್ರ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಸ್ಥಳೀಯರು ಅವರನ್ನು ಇನ್ನೊಂದು ಅಟೋರಿಕ್ಷಾದ ಮೂಲಕ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದರೆನ್ನಲಾಗಿದೆ. ರಿಕ್ಷಾ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ ತಿಳಿದು ಬಂದಿದೆ.