ಬಂಟ್ವಾಳ: ಅಪರಿಚಿತ ಪಾದಾಚಾರಿ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿದ ಘಟನೆ ಡಿ.25 ರಂದು ನಡೆದಿದೆ.
ಅಪಘಾತದಿಂದಾಗಿ ವ್ಯಕ್ತಿ ತಲಪಾಡಿ ರಸ್ತೆಯ ಬದಿಯಲ್ಲಿ ರಕ್ತಸ್ರಾವವಾಗಿ ಬಿದ್ದುಕೊಂಡಿದ್ದು, ವ್ಯಕ್ತಿಯನ್ನು ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಈ ವರೆಗೆ ಸಿಗದೆ ಇರುವುದರಿಂದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸಂಬಂಧಿತ ಕುಟುಂಬವರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ವೇಳೆ ಯಾರಾದರೂ ಇವರ ಪರಿಚಯವಿದ್ದು ಅಥವಾ ಸಂಬಂಧಿಕರು ಇದ್ದರೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹೋಗಬಹುದು ಅಥವಾ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡಬಹುದು ಎಂದು ಟ್ರಾಫಿಕ್ ಎಸ್. ಐ. ರಾಜೇಶ್ ಕೆ.ವಿ.ತಿಳಿಸಿದ್ದಾರೆ.