ಮಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಸರಕಾರ ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಿದ ಹಿನ್ನೆಲೆ ಜ.22 ರಂದು ನಡೆಯಬೇಕಿದ್ದ ‘ಮಂಗಳೂರು ಕಂಬಳ’ವನ್ನು ಮುಂದೂಡಲಾಗಿದೆ.
ಬೃಜೇಶ್ ಚೌಟ ರವರ ಸಾರಥ್ಯ ಜ.22 ರಂದು ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಬಂಗ್ರಕೂಳೂರಿನಲ್ಲಿ ನಡೆಯಬೇಕಿದ್ದ 5ನೇ ವರ್ಷದ ಕಂಬಳವನ್ನು ಪ್ರಸ್ತುತ ಪರಿಸ್ಥಿತಿಯನ್ನು ಮತ್ತು ಸರಕಾರದ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದೂಡಲಾಗಿದ್ದು, ಜಿಲ್ಲಾ ಕಂಬಳ ಸಮಿತಿ ಜೊತೆ ಚರ್ಚಿಸಿ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮಂಗಳೂರು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.