ವಿಟ್ಲ: ಎಸ್.ಡಿ.ಎಂ.ಸಿ. ತರಬೇತಿ ಕಾರ್ಯಾಗಾರ ಮತ್ತು ಪೋಷಕರ ಸಭೆ ಜ.6 ರಂದು ಪಡಿಬಾಗಿಲು ಶಾಲೆಯಲ್ಲಿ ನಡೆಯಿತು.
ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಯವರು ಶಾಲೆಗೆ ಗ್ರೈಂಡರನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಜಿನಚಂದ್ರ ಜೈನ್, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪದ್ಮಾವತಿ , ಜನಾರ್ದನ, ಅಮಿತ್ ರೈ, ಪುಷ್ಪಲತ, ಉಷಾ, ಸೀತಾರಾಮ ಶೆಟ್ಟಿ, ಕೈರುನ್ನಿಸಾ, ಶಮೀಮ, ವಿಶಾಲಾಕ್ಷಿ, ರೇಖಾ, ಕಾಂತಿ, ಶಶಿಕಲಾ, ನರಸಿಂಹ ಬಲ್ಲಾಳ್, ಭವಾನಿ, ರೇಣುಕ, ಜಯಶ್ರೀ, ಎಂ.ಅನಿತ, ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾವತಿ.ವೈ ಕುದ್ದುಪದವು, ವಿಠಲ. ಜಿ ಕುದ್ದುಪದವು ಶಾಲೆ, ಮುತ್ತುರಾಜ್ ಪಡಿಬಾಗಿಲು ಶಾಲೆ , ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿ ಸುಜಾತ ರೈ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಶಿಕಲಾ ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕಿ ಲಲಿತ ಧನ್ಯವಾದ ಸಲ್ಲಿಸಿದರು. ಪ್ರೌಢಶಾಲಾ ಸಹ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.