ಬೆಂಗಳೂರು: ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪೊಲೀಸ್ ಪದಕ ಘೋಷಣೆ ಆಗಿದೆ. ಪೊಲೀಸ್ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ ನೀಡಲಾಗುವ ಪ್ರಶಂಸನೀಯ ಪದಕಕ್ಕೆ ಕರ್ನಾಟಕದ 19 ಅಧಿಕಾರಿಗಳು ಈ ಬಾರಿ ಆಯ್ಕೆ ಆಗಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನೀಡಲಾಗುವ ಪದಕಕ್ಕೆ 19 ಪೊಲೀಸರು ಭಾಜನರಾಗಲಿದ್ದಾರೆ. ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆ ಆಗಿರುವ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಭಾರತದ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ದಿನದಂದು ಈ ಪದಕ ನೀಡಲಾಗುತ್ತದೆ. ಈ ಪೈಕಿ ಕರ್ನಾಟಕ ಈ ಬಾರಿ 19 ಪದಕಗಳನ್ನು ಪಡೆದುಕೊಂಡಿದೆ. ಶ್ಲಾಘನೀಯ ಸೇವಾ ಪದಕ ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.
- ಬಿ. ದಯಾನಂದ್, ಎಡಿಜಿಪಿ, ಗುಪ್ತಚರ ಇಲಾಖೆ
- ಆರ್. ಹಿತೇಂದ್ರ, ಎಡಿಜಿಪಿ, ಕ್ರೈಂ & ಟೆಕ್ನಿಕಲ್ ಸರ್ವಿಸ್
- ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
- ರಾಮಯ್ಯ ಜನಾರ್ದನ್, KSRP 5ನೇ ಬೆಟಾಲಿಯನ್
- ಡಿ. ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
- ಪ್ರಭುದೇವ್ ರವಿಪ್ರಸಾದ್, ಹುಣಸೂರು DySP
- ವೆಂಕಟಪ್ಪನಾಯಕ ಓಲೇಕಾರ್, ಸಿಂಧನೂರು DySP
- ಎಂ. ಮಲ್ಲೇಶಯ್ಯ, DySP, ಆನೇಕಲ್ ಉಪವಿಭಾಗ
- ಯಶವಂತಕುಮಾರ್, DySP, ಸೈಬರ್ ಕ್ರೈಂ ಸಿಐಡಿ
- ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್‌ಬಿ, ಕಲಬುರಗಿ
- ಕೆ.ಎಂ. ರಮೇಶ್. DySP, ಕರ್ನಾಟಕ ಲೋಕಾಯುಕ್ತ
- ಎಸ್.ಬಿ. ಕೆಂಪಯ್ಯ, ಸಿಐಡಿ ಡಿವೈಎಸ್‌ಪಿ
- ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್
- ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
- ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
- ಎಮ್.ಎಚ್. ರೇವಣ್ಣ, ಎಎಸ್‌ಐ, ಜಂಟಿ ಸಿಪಿ ಕಚೇರಿ ಬೆಂಗಳೂರು
- ಮಂಗಳೂರಿನ ಕೆಎಸ್‍ಆರ್‍ಪಿ 7ನೇ ಬೆಟಾಲಿಯನ್‍ನ ಹೆಡ್‍ಕಾನ್‍ಸ್ಟೆಬಲ್ ಪ್ರಕಾಶ್ ಶೆಟ್ಟಿ
- ಕೊಡಗು ಜಿಲ್ಲೆ ಡಿಎಆರ್‍ನ ಎಆರ್‍ಎಸ್‍ಐ ಜಿತೇಂದ್ರ ಕುಡುಕಡಿ