ಪಶ್ಚಿಮ ರೈಲ್ವೆ(Western Railway)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಹಾಸ್ಪಿಟಲ್ ಅಟೆಂಡೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇವೆ. 12ನೇ ತರಗತಿ, ಬಿಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಫೆಬ್ರವರಿ 1ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ..
ಸಂಸ್ಥೆ – ಪಶ್ಚಿಮ ರೈಲ್ವೆ
- ಹುದ್ದೆಯ ಹೆಸರು ಹಾಸ್ಪಿಟಲ್ ಅಟೆಂಡೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್
- ಒಟ್ಟು ಹುದ್ದೆಗಳು 20
- ವಿದ್ಯಾರ್ಹತೆ 12ನೇ ತರಗತಿ, ಬಿಎಸ್ಸಿ ನರ್ಸಿಂಗ್
- ಕೆಲಸದ ಸ್ಥಳ ಮಧ್ಯಪ್ರದೇಶ
- ಸಂಬಳ ಮಾಸಿಕ ₹ 18,000-44,900
- ಆಯ್ಕೆ ವಿಧಾನ ಸಂದರ್ಶನ
- ಸಂದರ್ಶನ ನಡೆಯುವ ದಿನಾಂಕ 01/02/2022
ಹುದ್ದೆಯ ಮಾಹಿತಿ:
- ನರ್ಸಿಂಗ್ ಸೂಪರಿಂಟೆಂಡೆಂಟ್-10
- ಹಾಸ್ಪಿಟಲ್ ಅಟೆಂಡೆಂಟ್-10
- ಒಟ್ಟು ಹುದ್ದೆಗಳು: 20
ವಿದ್ಯಾರ್ಹತೆ:
ನರ್ಸಿಂಗ್ ಸೂಪರಿಂಟೆಂಡೆಂಟ್-ಬಿ.ಎಸ್ಸಿ ನರ್ಸಿಂಗ್
ಹಾಸ್ಪಿಟಲ್ ಅಟೆಂಡೆಂಟ್-ಪಿಯುಸಿ
ವಯೋಮಿತಿ:
ನರ್ಸಿಂಗ್ ಸೂಪರಿಂಟೆಂಡೆಂಟ್-20-40 ವರ್ಷ
ಹಾಸ್ಪಿಟಲ್ ಅಟೆಂಡೆಂಟ್-18-33 ವರ್ಷ
ಉದ್ಯೋಗದ ಸ್ಥಳ:
ಪಶ್ಚಿಮ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಹಾಸ್ಪಿಟಲ್ ಅಟೆಂಡೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಧ್ಯಪ್ರದೇಶದ ರತ್ಲಮ್ನಲ್ಲಿ ಉದ್ಯೋಗ ನೀಡಲಾಗುತ್ತದೆ.
ವೇತನ:
ನರ್ಸಿಂಗ್ ಸೂಪರಿಂಟೆಂಡೆಂಟ್-ಮಾಸಿಕ ₹ 44,900
ಹಾಸ್ಪಿಟಲ್ ಅಟೆಂಡೆಂಟ್-10-ಮಾಸಿಕ ₹18,000
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 25/01/2022
ಸಂದರ್ಶನ ನಡೆಯುವ ದಿನಾಂಕ: 01/02/2022
ಸಂದರ್ಶನ ನಡೆಯುವ ಸ್ಥಳ:
ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ
ಅನೆಕ್ಸಿ ಹಾಲ್, ರತ್ಲಮ್