ಯುವವಾಹಿನಿ– ಯುವಕರನ್ನು ಒಗ್ಗೂಡಿಸಿ ಒಗ್ಗಟ್ಟಿನ ಮಂತ್ರವನ್ನು ಸಾರಿ ಹೇಳಿದ ಸಂಘಟನೆ.. ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ಸಂಘಟನೆಯ ಕಾರ್ಯಗಳಂತೂ ಪ್ರತಿಬಾರಿಯೂ ಭಿನ್ನ ವಿಭಿನ್ನ.. ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬ ತತ್ವದಡಿ ಸಮಾಜಮುಖಿ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿರಾಗಿರುವ ಸಂಘಟನೆಯೂ ಹೌದು..
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು ಇದರ 34ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭವು ಜ.30 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳು:
- ಅಧ್ಯಕ್ಷರಾಗಿ- ಉದಯ್ ಅಮೀನ್ ಮಟ್ಟು.
- ಪ್ರಥಮ ಉಪಾಧ್ಯಕ್ಷರು – ರಾಜೇಶ್ ಬಿ.ಬಂಟ್ವಾಳ.
- ಎರಡನೇ ಉಪಾಧ್ಯಕ್ಷರು- ಹರೀಶ್ ಪೂಜಾರಿ ಮಂಗಳೂರು.
- ಪ್ರಧಾನ ಕಾರ್ಯದರ್ಶಿ – ಸತೀಶ್ ಕಿರುಪ್ಪಾಡಿ.
- ಜೊತೆ ಕಾರ್ಯದರ್ಶಿ – ವಿದ್ಯಾ ರಾಜೇಶ್.
- ಕೋಶಾಧಿಕಾರಿ – ಜಗದೀಶ್ ಚಂದ್ರ ಮೂಡಬಿದ್ರೆ.
ಸಂಘಟನಾ ಕಾರ್ಯದರ್ಶಿಗಳಾಗಿ:
ದೀಪಕ್ ಎರ್ಮಾಲ್, ಪ್ರಸಾದ್ ಬೆಳ್ತಂಗಡಿ, ಚರಣ್ ಸುರತ್ಕಲ್, ಅಜಿತ್ ಪಾಲೇರಿ ಉಪ್ಪಿನಂಗಡಿ, ಯೋಗಿಶ್ ಬಜ್ಪೆ, ಭವಾನಿ ಗಣೇಶ್ ಅಮೀನ್ ಶಕ್ತಿನಗರ, ಸತೀಶ್ ಕುಪ್ಪೆಪದವು, ಶಿವಾನಂದ ಬಂಟ್ವಾಳ, ಶಶಿಕುಮಾರ್, ಪ್ರವೀಣ್ ಪೂಜಾರಿ ನೆಟ್ಟಾರ ಸುಳ್ಯ, ಹರೀಶ್ ಪೂಜಾರಿ ಪಣಂಬೂರು, ಹರಿಪ್ರಸಾದ್ ಹೊಸಂಗಡಿ ಮೂಡಬಿದ್ರೆ, ಕಿಶನ್ ಪೂಜಾರಿ ಬೆಂಗಳೂರು, ಚಿತ್ರಾಕ್ಷಿ ಕೊಟ್ಯಾನ್ ಪಡುಬಿದ್ರೆ, ಸುಜಾತ ಶೇಖರ್, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ರವಿ ಕೊಂಡಾಣ, ಶಿವಪ್ರಸಾದ್ ಕಡಬ.
ನಿರ್ದೇಶಕ ಮಂಡಳಿ:
- ವಿಶು ಕುಮಾರ್ ದತ್ತಿ ನಿಧಿ ಸಮಿತಿ ಸಂಚಾಲಕರಾಗಿ ಪ್ರಶಾಂತ್ ಅನಂತಾಡಿ.
- ಯುವ ಸಿಂಚನ ಕಾರ್ಯನಿರ್ವಹಕ ಸಂಪಾದಕರಾಗಿ ಭಾಸ್ಕರ್ ಕೋಟ್ಯಾನ್ ಕೂಳೂರು.
- ಮಹಿಳಾ ಸಂಘಟನೆ ನಿರ್ದೇಶಕರಾಗಿ ಸುಮಾ ವಸಂತ್ ಕಂಕನಾಡಿ.
- ಪ್ರಚಾರ ನಿರ್ದೇಶಕರಾಗಿ ಸುದರ್ಶನ್ ಕಾರ್ಕಳ.
- ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ರಮೇಶ್ ಪೂಜಾರಿ.
- ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ರೇಖಾ ಗೋಪಾಲ್.
- ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾಗಿ ಬಾಬು ಪೂಜಾರಿ ಪುತ್ತೂರು.
- ಕ್ರೀಡೆ& ಆರೋಗ್ಯ ನಿರ್ದೇಶಕರಾಗಿ ನವೀನ್ ಪಚ್ಚೇರಿ.
- ಕಲೆ ಸಾಹಿತ್ಯ ಸಾಂಸ್ಕೃತಿಕ ನಿರ್ದೇಶಕರಾಗಿ ಜಗದೀಶ್ ಕುಮಾರ್ ಉಡುಪಿ ಆಯ್ಕೆಗೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಎಚ್. ಎಸ್. ಸಾಯಿರಾಂ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಕೆ.ಎಸ್.ಪಿ.ಎಸ್. ರವರು ಯುವಸಿಂಚನ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್,ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ, ಡಾ.ರಾಕೇಶ್ ಪೂಜಾರಿ ಹಾಗೂ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.
“ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳನ್ನು ಬಿಸಾಡುವುದೇ ‘ಯುವ'” – ವಿಖ್ಯಾತಾನಂದ ಸ್ವಾಮೀಜಿ
‘ಯುವ’ ಎಂದರೆ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳನ್ನು ಬಿಸಾಡುವುದಾಗಿದೆ. ನೀವು ಯಾರ ಅಸ್ತ್ರವಾಗಲು ಹೋಗಬೇಡಿ ಸಮಾಜದಲ್ಲಿ ನಿಮ್ಮ ಸ್ವಂತದ್ದೇನಾದರು ಸಾಧನೆ ಮಾಡಿ. ಸಮಾಜಕ್ಕೆ ಆದರ್ಶವಾಗುವಂತಹ ಯುವಕರಾಗಿ, ಸಂಕುಚಿತ ಮನೋಭಾವವನ್ನು ಬಿಟ್ಟು, ವಿಶಾಲ ಮನೋಭಾವ ಹೃದಯವನ್ನಿಟ್ಟುಕೊಂಡು ಸಮಾಜ ಸೇವೆಯನ್ನು ಮಾಡಿ ಎಂದರು.
“ಆರ್ ಎಸ್ ಎಸ್ ಬಿಟ್ಟರೆ ನಾನು ನೋಡಿದ ಅತ್ಯಂತ ಶಿಸ್ತಿನ ಇನ್ನೊಂದು ಸಂಘಟನೆಯೇ ಯುವವಾಹಿನಿ” – ತಾರಾನಾಥ್ ಹೈಕೋರ್ಟ್ ವಕೀಲರು…!!!
ಯುವವಾಹಿನಿ 34ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭ ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್ ನ ಪದನ್ನೋತಿ ಹಿರಿಯ ವಕೀಲರಾದ ತಾರಾನಾಥ್ ಪೂಜಾರಿ ರವರು ಮಾತನಾಡಿ, ಆರ್.ಎಸ್.ಎಸ್. ಬಿಟ್ಟರೆ ನಾನು ನೋಡಿದ ಅತ್ಯಂತ ಶಿಸ್ತಿನ ಇನ್ನೊಂದು ಸಂಘಟನೆ ಎಂದರೇ ಅದು ಯುವವಾಹಿನಿ ಎಂದು ಹೇಳಿದರು. ಅವರ ಕಾರ್ಯ ದಕ್ಷತೆಗಳು ಬಹಳ ಶಿಸ್ತು ಬದ್ಧವಾಗಿದ್ದು, ಇತರ ಬೇರೆ ಸಂಘಟನೆಗೆ ಮಾದರಿಯಾಗಿದೆ ಎಂದರು.
“ಭಾವುಕರಾದ ರಾಜಾರಾಂ ಕೆ.ಬಿ.”..!!
ಯುವವಾಹಿನಿ ಕೇಂದ್ರ ಸಮಿತಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದಂತಹ ಡಾ. ರಾಜಾರಾಮ್ ಕೆ.ವಿ. ರವರು ತಮ್ಮ ಅಧ್ಯಕ್ಷೀಯ ಅವಧಿಯ ಸಂದರ್ಭದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ದಿನವನ್ನು ನೆನೆದು ಭಾವುಕರಾದರು. ಈ ದಿನ ನಾನು ಈ ಎಲ್ಲಾ ಸ್ಥಾನಮಾನದಲ್ಲಿ ಇದ್ದೇನೆ ಎಂದರೇ ಅದಕ್ಕೆಲ್ಲಾ ಕಾರಣ ನನ್ನ ತಂದೆ ಎಂದು ಹೇಳುತ್ತಾ ತಮ್ಮ ತಂದೆಯ ಬಗ್ಗೆ ಭಾವುಕ ನುಡಿಗಳನ್ನಾಡಿದರು.