ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ರವರ ಸಹಯೋಗದಲ್ಲಿ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ‘ಜಿ.ಎಲ್. ಟ್ರೋಫಿ-2022’ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಎಲ್. ಬಲರಾಮ್ ಆಚಾರ್ಯ ರವರು ಉದ್ಘಾಟಿಸಿದರು. ಪಂದ್ಯಾಟದಲ್ಲಿ ಎಲ್ಲಾ ಶಾಖೆಗಳ ನಾಲ್ಕು ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದಲ್ಲಿ ಹಾಸನ ಬ್ರಾಂಚ್ ಪ್ರಥಮ ಬಹುಮಾನ ಪಡೆದಿದ್ದು, ಪುತ್ತೂರು ಬ್ರಾಂಚ್ ರನ್ನರ್ಸ್ ಟ್ರೋಫಿಯನ್ನು ಗೆದ್ದರು.
ಬೆಸ್ಟ್ ಬೌಲರ್ ಬಹುಮಾನವನ್ನು ವಿಲ್ಸನ್, ಬೆಸ್ಟ್ ಬ್ಯಾಟ್ಸ್ ಮನ್ ಬಹುಮಾನವನ್ನು ವಿನಯ್ ಕೆಪಿ, ಬೆಸ್ಟ್ ಕ್ಯಾಚರ್ ಬಹುಮಾನವನ್ನು ಕಿಶನ್, ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನವನ್ನು ತಿಪ್ಪೇಶ್ ಹಾಸನ್ ಪಡೆದರು.
ಬಹುಮಾನವನ್ನು ಲಕ್ಷ್ಮೀಕಾಂತ್ ಬಿ.ಆಚಾರ್ಯ, ಸುಧಾನ್ವ ಬಿ. ಆಚಾರ್ಯ ಹಾಗೂ ಶ್ರೀರಾಮ್ ಆಚಾರ್ಯ ವಿತರಿಸಿದರು.