ಪುತ್ತೂರು: ಜೀಕನ್ನಡ ವಾಹಿನಿಯಲ್ಲಿ ವಾರಾಂತ್ಯ ಪ್ರಸಾರವಾಗುತ್ತಿರುವ ‘ಡ್ರಾಮಾ ಜ್ಯೂನಿಯರ್ಸ್’ ಸೀಸನ್-4 ಆಡಿಷನ್ ನಡೆಯುತ್ತಿದ್ದು, ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಗೋಳ್ತಿಲ ರಾಜೇಶ್ ಕೆ. ಮಯೂರ ಮತ್ತು ಜಯಲಕ್ಷ್ಮಿ ರವರ ಪುತ್ರಿ ಆದ್ಯ ಆರ್.ಜೆ. ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಫೆ.3 ರಂದು ಬೆಂಗಳೂರಿನ ಕತ್ರಿಗುಪ್ಪೆ ಅಬ್ಬಯ್ಯ ಸ್ಟುಡಿಯೋದಲ್ಲಿ 2ನೇ ಹಂತದ ಅಡಿಷನ್ ನಡೆಯಲಿದ್ದು, ಆದ್ಯ ಆರ್.ಜೆ. ರವರು ಭಾಗವಹಿಸಲಿದ್ದಾರೆ.
‘ಡ್ರಾಮಾ ಜೂನಿಯರ್ಸ್’ ಒಂದು ಕನ್ನಡ ಟ್ಯಾಲೆಂಟ್ ಸರ್ಚ್ ರಿಯಾಲಿಟಿ ಶೋ ಆಗಿದ್ದು, ಮಕ್ಕಳ ಪ್ರತಿಭೆಗಳನ್ನು ಜಗತ್ತಿನ ಮುಂದಿಡಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಹಿಂದಿನ ಸೀಸನ್ ಗಳಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದು, ಈ ಶೋ ನ ನಂತರ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದಿವೆ. ಅದೇ ರೀತಿ ಕರಾವಳಿಯ ಈ ಪುಟ್ಟ ಬಾಲೆ ‘ಡ್ರಾಮಾ ಜ್ಯೂನಿಯರ್ಸ್’ ಸೀಸನ್-4 ಗೆ ಆಯ್ಕೆಯಾಗಿ ತನ್ನ ಪ್ರತಿಭೆಯ ಮೂಲಕ ಹೆಚ್ಚು ಅವಕಾಶಗಳನ್ನು ಪಡೆದು ಬಣ್ಣದ ಜಗತ್ತಿನಲ್ಲಿ ಮಿಂಚಲಿ ಎಂಬುದು ನಮ್ಮ ಆಶಯ..