ಮಂಗಳೂರು: ತಂಡವೊಂದು ಬಲ್ಲಾಳ್ ಬಾಗ್ ಸಮೀಪದ ಕಾಲೇಜೊಂದರ ಬಳಿ ತಲವಾರು ಹಿಡಿದು ದಾಂಧಲೆ ನಡೆಸಿರುವ ಘಟನೆ ಫೆ.1 ರ ಸಂಜೆ ನಡೆದಿದೆ.
ವಾಹನಗಳ ನಡುವೆ ಡಿಕ್ಕಿಯಾದ ವಿಚಾರದ ಬಗ್ಗೆ ವಿದ್ಯಾರ್ಥಿಗಳ ನಡುವೆ ಮಾತುಕತೆ ನಡೆದಿತ್ತು ಎನ್ನಲಾಗಿದ್ದು, ಇದಾದ ಸ್ವಲ್ಪಸಮಯದ ಬಳಿಕ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿ ಆಗಮಿಸಿ ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬರ್ಕೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.