ಶ್ರೀನಿವಾಸಪುರ: ಪಟ್ಟಣದಲ್ಲಿ ಮದುವೆ ಆರತಕ್ಷತೆ ನಡೆಯುತ್ತಿದ್ದಾಗ ವಧು ದಿಢೀರ್ ಕುಸಿದು ಬಿದ್ದು, ಆಕೆಯ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ, ಆಕೆಯ ಪೋಷಕರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಮದುವೆ ಮಾಡಿಕೊಂಡು ಸುಖ ಸಂಸಾರ ನಡೆಸಬೇಕಿದ್ದ ಚೈತ್ರಾ(26) ಇಹಲೋಕ ತ್ಯಜಿಸಿದ್ದು, ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಮದುವೆ ಆರತಕ್ಷತೆ ನಡೆಯುತ್ತಿದ್ದಾಗ ಚೈತ್ರಾ ವೇದಿಕೆ ಮೇಲೆ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಲಾಗಿದೆ.
ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಿ ದ್ದಾರೆ. ಇದರಿಂದ ಕಂಗಾಲಾದ ಪೋಷ ಕರು ಆಕೆಯ ಅಂಗಾಂಗ ದಾನ ಮಾಡಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.