ಬಂಟ್ವಾಳ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿ ಮತ್ತು ಹ್ಯೂಮನ್ ರೈಟ್ ಫೆಡರೇಷನ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷರಾದ ಕೊಲ್ಲಾಡಿ ಬಾಲಕೃಷ್ಣ ರೈ ಯವರ ತಂದೆ ಮುಂಡ್ರಾಡಿ ಗುತ್ತು ನಾರಾಯಣ ರೈ ರವರು ನಿಧನರಾದರು.
ನಾರಾಯಣ ರೈ ರವರು ನಿವೃತ್ತ ಮುಖ್ಯ ಅಧ್ಯಾಪಕರಾಗಿದ್ದು, ಸಾಮಾಜಿಕ ಮತ್ತು ರಾಜಕೀಯ ಧುರೀಣರಾಗಿದ್ದರು.
ಮೃತರು ಪತ್ನಿ ಶಾರದಾ ಯನ್ ರೈ ಮತ್ತು ಪುತ್ರರಾದ ವಿದ್ಯಾನಂದ ರೈ , ಬಾಲಕೃಷ್ಣ ರೈ ಹಾಗೂ ಐದು ಪುತ್ರಿಯರು ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.