ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿ ಶೋಚನಿಯವಾಗಿದ್ದು, ರೊಮೇನಿಯನ್ ಮತ್ತು ಪೋಲೆಂಡ್ ಗಡಿಯಲ್ಲಿ ನಿಯೋಜಿಸಲಾದ ಸೈನಿಕರು ಕಿರುಕುಳದ ಜೊತೆಗೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಭಾನುವಾರ ಮಾರ್ಗಸೂಚಿ ಹೊರಡಿಸಿ, ಭಾರತೀಯ ಪ್ರಜೆಗಳು ಸಂಘರ್ಷ ವಲಯಗಳಿಂದ ದೂರ ಹೋಗುವಂತೆ ಸೂಚಿಸಿದೆ.
ಪೋಲೆಂಡ್, ರೊಮೇನಿಯಾ ಮತ್ತು ಹಂಗೇರಿ ಗಡಿಯಲ್ಲಿ ಚೆಕ್ಪಾಯಿಂಟ್ಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಗಡಿ ಚೆಕ್‌ಪೋಸ್ಟ್‌ಗಳಿಗೆ ಹೊರಡುವಂತೆ ಸೂಚಿಸಿದೆ.
ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ಪ್ರತಿ ದಿನ ಬಂಕರ್ಗಳಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಕೀವ್‌ನಿಂದ ಪಶ್ಚಿಮ ಗಡಿಗಳಿಗೆ ಕರೆದೊಯ್ಯುಲಾಗುತ್ತಿದೆ. ಆದರೆ ಪೋಲೆಂಡ್ ಮತ್ತು ರೊಮೇನಿಯಾದ ಗಡಿಗಳಲ್ಲಿ ರಷ್ಯಾ ಸೈನಿಕರಿಂದ ಅವರು ಕಿರುಕುಳ ಅನುಭವಿಸುತ್ತಿದ್ದಾರೆ. ಈ ಕುರಿತಾದ ವಿಡಿಯೋಗಳನ್ನ ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.