ಉಪ್ಪಿನಂಗಡಿ: ಅಂಗಳದಲ್ಲಿಟ್ಟಿದ್ದ ಕೆಂಪು ಕಲ್ಲು ಕುಸಿದು ಮೂರು ವರ್ಷದ ಮಗುವಿನ ಮೈಮೇಲೆ ಬಿದ್ದು, ಮಗು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟಿ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಕುಪ್ಪೆಟಿ ನಿವಾಸಿ ಅಶ್ರಪ್ ರವರ ಪುತ್ರ ಮೂರು ವರ್ಷದ ಮಹಮ್ಮದ್ ನೌಷೀರ್ ಎನ್ನಲಾಗಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮನೆ ಹೊರಗಡೆ ಆಟ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಶ್ರಪ್ ಅವರ ಮನೆಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕಲ್ಲು ತಂದು ಇಡಲಾಗಿತ್ತು. ಆಕಸ್ಮಿಕವಾಗಿ ಕಲ್ಲು ಜಾರಿ ಮಗವಿನ ಮೇಲೆ ಬಿದ್ದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.