ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ನಿವಾಸಿ, ಕನ್ಯಾನ ಹಂಝತ್ತುಲ್ ಕರ್ರಾರ್ ಮಸೀದಿಯ ಸ್ಥಾಪಕರೂ, ಮತ್ತು ಆಡಳಿತ ಸಮಿತಿಯ ಅಧ್ಯಕ್ಷ ಸುಲೈಮಾನ್ ಫೈಝಿ ಉಸ್ತಾದ್ ಅವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ರಾಜ್ಯ ಫೈಝಿ ಅಸೋಶಿಯೇಶನ್ ಇದರ ಕೋಶಾಧಿಕಾರಿಯಾಗಿದ್ದರು. ಮೃತರಿಗೆ ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.
ಕೆಲ ದಿನಗಳ ಹಿಂದೆ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸೋವದ ಹೊರಕಾಣಿಕೆ ವೇಳೆ ಮಸೀದಿ ಸಮೀಪ ಹಿಂದೂ ಬಾಂಧವರಿಗೆ ಪಾನೀಯ ಮತ್ತು ಸಿಹಿ ಹಂಚಿದ್ದು, ಈ ಸೌಹಾರ್ದತೆಯ ನಡೆಯಲ್ಲಿ ಸುಲೈಮಾನ್ ಫೈಝಿ ಉಸ್ತಾದ್ ರವರು ಪ್ರಮುಖ ಪಾತ್ರ ವಹಿಸಿದ್ದರು.