ಬಂಟ್ವಾಳ: ಸಾರ್ವಜನಿಕವಾಗಿ ಹೊಡೆದಾಟ ನಡೆಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಸಿದ್ದಕಟ್ಟೆ ಸಂತೆ ಮಾರುಕಟ್ಟೆ ಬಳಿ ನಡೆದಿದೆ.
ಬಂಧಿತರನ್ನು ಮೊಹಮ್ಮದ್ ಆಲಿ, ಮೊಹಮ್ಮದ್ ಆರೀಫ್, ಮಹಮ್ಮದ್ ರವೂಫ್ ಎನ್ನಲಾಗಿದೆ.
ಮೊಹಮ್ಮದ್ ಆಲಿ, ಮೊಹಮ್ಮದ್ ಆರೀಫ್, ಮಹಮ್ಮದ್ ರವೂಫ್ ಸಿದ್ದಕಟ್ಟೆ ಸಂತೆ ಮಾರ್ಕೆಟ್ ಬಳಿ ವಾರದ ಸಂತೆ ಸಮಯ ರಸ್ತೆಯ ಬದಿಯಲ್ಲಿ ಬಟ್ಟೆ ಅಂಗಡಿ ಇಡುವ ವಿಚಾರವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರಸ್ತೆ ಬದಿ ಒಬ್ಬರಿಗೊಬ್ಬರು ಪರಸ್ಪರ ಬೈದಾಡಿಕೊಂಡು, ಹೊಡೆದಾಡಿಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಮಾಡಿದ ಆರೋಪದಡಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ.17-2022 ಕಲಂ:160 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.