ಪುತ್ತೂರು: ಶ್ರೀ ವಾಸುಕಿ ನಾಗರಾಜ ಸನ್ನಿಧಿ ಟ್ರಸ್ಟ್(ರಿ) ಸೂತ್ರಬೆಟ್ಟು, ಆಶ್ರಯ ಕಾಲನಿಯಲ್ಲಿ ಶ್ರೀ ವಾಸುಕೀ ನಾಗರಾಜ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ನೂತನವಾಗಿ ನಿರ್ಮಿಸಿದ ಅಶ್ವತ್ಥಕಟ್ಟೆಯ ನವೀಕರಣ ಕಾರ್ಯಕ್ರಮವು ಮಾ.27 ರಂದು ನಡೆಯಲಿದೆ.
ಕೆಮ್ಮಿಂಜೆ ವೇದಮೂರ್ತಿ, ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವಾಸುಕೀ ನಾಗರಾಜ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ನೂತನವಾಗಿ ನಿರ್ಮಿಸಿದ ಅಶ್ವಥಕಟ್ಟೆಯ ನವೀಕರಣ ಮತ್ತು ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.
ಮಾ.26 ರಂದು ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಮಾ.27 ರಂದು ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿ, ಬ್ರಹ್ಮಕಲಶ ಪೂಜೆ ನಡೆಯಲಿದ್ದು, ನಂತರ ಶ್ರೀ ವಾಸುಕೀ ನಾಗರಾಜ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಅಶ್ವಥಕಟ್ಟೆಯಲ್ಲಿ ಅಶ್ವಥ ಕಲ್ಪೋಕ್ತ ಪೂಜೆ, ವಟು ಆರಾಧನೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.





























