ಪುತ್ತೂರು: ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಸುಳ್ಯದ ಅಪ್ರಾಪ್ತೆಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯುವಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಸುಳ್ಯ ಐವರ್ನಾಡಿನ ರಕ್ಷಿತ್ ಎನ್ನಲಾಗಿದೆ
ರಕ್ಷಿತ್ ಹಾಸ್ಟೆಲ್ ವೊಂದರಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸುತ್ತಿದ್ದು,ಆದರೇ ಬಾಲಕಿ ಆತನಿಗೆ ಬುದ್ಧಿವಾದ ಹೇಳಿ ಪ್ರೀತಿ ನಿರಾಕರಿಸಿದ್ದು, ಈ ಮೊದಲು ಈ ಬಗ್ಗೆ ಬಾಲಕಿಯ ತಂದೆಗೆ ಠಾಣೆಗೆ ದೂರು ನೀಡಿದ್ದರು.
ಆದರೇ ನಂತರ ರಕ್ಷಿತ್ ಹಾಸ್ಟೆಲ್ ವಾರ್ಡನ್ ಗೆ ಕರೆ ಮಾಡಿ ಬಾಲಕಿಯ ಅಣ್ಣನೆಂದು ತಿಳಿಸಿ ಬಾಲಕಿಯ ಜೊತೆ ಮಾತನಾಡಿ, ಹೊರಗಡೆ ಭೇಟಿಯಾಗುವಂತೆ ತಿಳಿಸಿ, ಹೆದರಿಸಿ ಬಿರುಮಲೆ ಗುಡ್ಡೆಗೆ ಬರುವಂತೆ ಹೇಳಿದ್ದು, ಅಲ್ಲಿಗೆ ಹೋದಾಗ ರಕ್ಷಿತ್ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ 354 ಎ,506 ಐಪಿಸಿ, ಸೆಕ್ಷನ್ 8 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.