ವಿಟ್ಲ: ಬಂಟರ ಸಂಘ ಅಳಿಕೆ ಗ್ರಾಮದ ಸಮಿತಿಯ ‘ಕ್ರೀಡಾಕೂಟ 2021-22’ ಮಾ.6 ರಂದು ಅಳಿಕೆ ವಾಣಿ ವಿಹಾರದ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಕ್ರೀಡಾಕೂಟವನ್ನು ಕೇಪು ಗ್ರಾಮ ಸಮಿತಿಯ ಬಂಟರ ಸಂಘದ ಅಧ್ಯಕ್ಷರಾದ ಜಗಜ್ಜೀವನ್ ರಾಮ್ ಶೆಟ್ಟಿ ಬೇಡೆಮಾರ್ ಮೈರ ರವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ಮಾ.13 ರಂದು ಬಂಟರ ಸಂಘ ಅಳಿಕೆ ಗ್ರಾಮದ ಸಮಿತಿಯ ನೇತೃತ್ವದಲ್ಲಿ ‘ಶ್ರೀ ಸತ್ಯ ನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮ’ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಗದೀಶ್ ಶೆಟ್ಟಿ ಮುಳಿಯಗುತ್ತು, ಡಾ. ಪೂವಪ್ಪ ಶೆಟ್ಟಿ ಅಳಿಕೆ ರವರು ಭಾಗವಹಿಸಲಿದ್ದಾರೆ ಎಂದು ಬಂಟರ ಸಂಘ ಅಳಿಕೆ ಗ್ರಾಮ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ರೈ ಪಡ್ಡಂಬೈಲು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.