ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ವಿಟ್ಲಪಡ್ನೂರು ಇದರ ನೂತನ ಯುವಕ ಮಂಡಲದ ಪದಗ್ರಹಣ ಕಾರ್ಯಕ್ರಮ ಮಾ.6 ರಂದು ಅಂಗನವಾಡಿ ವಠಾರ ಪೂರ್ಲಪ್ಪಾಡಿಯಲ್ಲಿ ಜರುಗಿತು.
ಯುವಕ ಮಂಡಲದ ವತಿಯಿಂದ ಬೃಹತ್ ರಕ್ತದಾನ ಶಿಬಿರ, ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ರಕ್ತದ ಗುಂಪು ಪರೀಕ್ಷೆ ಅಲ್ಲದೇ ಉಚಿತ ಇ ಶ್ರಮ್ ಕಾರ್ಡ್, ಅಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಸಭಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾಶಂಕರಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಜಿಲ್ಲಾ ಲಯನ್ಸ್ ಗವರ್ನರ್ ಡಾ. ಗೀತಾಪ್ರಕಾಶ್ ಎ ನೆರವೇರಿಸಿದರು.
ಅಥಿತಿಗಳಾಗಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಮಲರಾಯಿ ದೈವಸ್ಥಾನ ಸೇವಾ ಟ್ರಸ್ಟ್ (ರಿ)ಪೂರ್ಲಪ್ಪಾಡಿ ಇದರ ಅಧ್ಯಕ್ಷರಾದ ರಾಮಣ್ಣ ಗೌಡ ದೇವರಮನೆ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಧರ್ಮಾವತಿ ದೇವರಮನೆ, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಾದ ಸಂಜೀವ ಪೂಜಾರಿ ಎನ್, ಶ್ರೀವರ ಯುವಕ ಮಂಡಲದ ಗೌರವಾಧ್ಯಕ್ಷರಾದ ಈಶ್ವರಭಟ್ ವಿ, ಶ್ರೀವರ ಯುವಕ ಮಂಡಲದ ಅಧ್ಯಕ್ಷರಾದ ಜಯಂತ್ ಪೂರ್ಲಿಪ್ಪಾಡಿ, ವಿಟ್ಲಪಡ್ನೂರು ಗ್ರಾಮ ಪಂಚಾಯತ್‌ನ ಸದಸ್ಯರಾದ ಜಯಲಕ್ಷ್ಮಿ .ಕೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಊರಿನ ಇಬ್ಬರು ಸಾಧಕರಿಗೆ ಸನ್ಮಾನ ಮಾಡಲಾಯಿತು. ಸುಜಾತ ಎ ಹಾಗೂ ಆಟೋ ಚಾಲಕ ವೃತ್ತಿಯ ರಮೇಶ್ ಪೂಜಾರಿ ರವರಿಗೆ ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಶ್ರೀವರ ಯುವಕ ಮಂಡಲದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಳವಿ, ಗೌತಮಿ, ಯಶಸ್ವಿನಿ ಪ್ರಾರ್ಥನೆ ಮಾಡಿದರು. ಜಯಂತ್ ಪ್ರಾಸ್ತಾವಿಕ ಮತ್ತು ಸ್ವಾಗತಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕುಸಲ್ದ ಗುರಿಕಾರ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷ-ಹಾಸ್ಯ-ವೈಭವ ಕಾರ್ಯಕ್ರಮ ಜರುಗಿತು.