ಪುತ್ತೂರು: ಬೀಡಿ ಬ್ರಾಂಚ್‌ನಿಂದ ತಂಬಾಕು ಮತ್ತು ಬೀಡಿಗಳು ಕಳವಾದ ಘಟನೆ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಬೀಡಿ ಬ್ರಾಂಚ್ ನಲ್ಲಿ ಮಾ.9 ರಂದು ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ಬೆಳಂದೂರು ನಿವಾಸಿ ಕುಂಞ ಎನ್ನಲಾಗಿದೆ.
ಮಹಮ್ಮದ್ ರವರು ಕೆಮ್ಮಿಂಜೆಯಲ್ಲಿ ಬೀಡಿ ಬ್ರಾಂಚ್ ಹೊಂದಿದ್ದು, ಮಾ.8 ರಂದು ಬಾಗಿಲು ಹಾಕಿ ಹೋಗಿದ್ದು, ಮಾ.9 ರಂದು ಬೆಳಗ್ಗೆ ಬಂದು ನೋಡಿದಾಗ ಅಂಗಡಿಯೊಳಗಿದ್ದ 2 ಗೋಣಿ ತಂಬಾಕು ಮತ್ತು ಸುಮಾರು 18 ಸಾವಿರ ಬೀಡಿಗಳು ಕಳವಾಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ 18 ಸಾವಿರ ರೂ. ಆಗಿದ್ದು, ಘಟನೆ ಕುರಿತು ಕೆ.ಮಹಮ್ಮದ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಕೂರ್ನಡ್ಕದಲ್ಲಿ ಬೀಡಿ ಬ್ರಾಂಚ್, ಮತ್ತು ಮನೆಯ ಶೆಡ್‌ನಿಂದಲೂ ಕಳವು ಮಾಡಿದ ಆರೋಪಿ ಕುಂಞ ಯನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಓಮ್ನಿ ಕಾರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.