ಸುಬ್ರಹ್ಮಣ್ಯ: ಏನೆಕಲ್ಲು ಗ್ರಾಮದ ವ್ಯಕ್ತಿಯೊಬ್ಬರು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.18 ರಂದು ನಡೆದಿದೆ.
ಏನೆಕಲ್ಲು ಗ್ರಾಮದ ಪರಮಲೆ ವೆಂಕಟ್ರಮಣ ಗೌಡ (72) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಮೃತರು ಪತ್ನಿ ನಾಗವೇಣಿ ಪಿ., ಪುತ್ರರಾದ ಶಿವಪ್ರಸಾದ್ ಪಿ.ವಿ., ರಕ್ಷಿತ್ ಪಿ.ವಿ ಹಾಗೂ ಪುತ್ರಿ ಜಯಶ್ರೀ ಪಿ.ವಿ. ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.